Thursday, September 15, 2011

ಹೊಸ ಜಗತ್ತಿಗೆ ಬಂದ .....ಮೊದಲ ದಿನದ ಅನುಭವಗಳು........ My First Day Experiance in this New world

ಹಲೋ.... ನಮಸ್ತೆ.... :-)  
      ಈ ಪ್ರಪಂಚಕ್ಕೆ ಕಣ್ಣು ಬಿಟ್ಟಿರುವ ಹೊಸ ಪಾಪು ನಾನು.....  ಅಮ್ಮನ ಹೊಟ್ಟೆಯೊಳಗೆ ಬೆಚ್ಚಗೆ ಇದ್ದೆ.... ನನ್ನದೇ ಅದ ಲೋಕದಲ್ಲಿ...ನನ್ನ ಪುಟ್ಟ ಪುಟ್ಟ ಕೈಗಳನ್ನು..ಕಾಲುಗಳನ್ನು ಮುದುರಿಕೊಂಡು.. ಅಮ್ಮನ ಹೊಟ್ಟೆಯನ್ನು ಒದ್ದುಕೊಂಡು...ಆಟ ಆಡಿಕೊಂಡು.... ಹಾಯಾಗಿ ಇದ್ದೆ....     ಆಗಸ್ಟ್ 1 ನೆ ದಿನಾಂಕದಂದು...  ಸೋಮವಾರ ಬೆಳಿಗ್ಗೆ 10 :36 ಕ್ಕೆ ನಾನು ಈ ಹೊಸ ಪ್ರಪಂಚಕ್ಕೆ ಕಾಲಿಟ್ಟೆ.....  ನನ್ನ ಅಪ್ಪ ... ಅಮ್ಮ,, ಅಜ್ಜಿಯರು, ತಾತ, ಚಿಕ್ಕಮ್ಮ, ದೊಡ್ಡಮ್ಮ... ... ಎಲ್ಲರೂ ನಾನು ಬರುವುದನ್ನೇ ಕಾಯುತ್ತಿದ್ದರಂತೆ.....   ಅಮ್ಮನಿಗೆ ನನ್ನ  ಮುಖ ತೋರಿಸಿ.... ಮೊದಲು ಸೇರಿದ್ದು,, ನನ್ನ ಅಪ್ಪನ ಮಡಿಲಿಗೆ......

ಮೊದಲು ಬಂದಾಗ ಏನೋ ಒಂದು ತರಹ ದ ಭಯ... ಗಾಭರಿ.... ನೋಡಿ ಹೇಗೆ ಇದ್ದೆ ಮೊದಲ ದಿನ ನಾನು ಅಂತ...
     

ಮೊದಲ ದಿನದ ... ಮೊದಲ ನೋಟ...  ಹೊಸ ಪ್ರಪಂಚದ ,,, ಹೊಸ ಜಗತ್ತಿಗೆ ಕಾಲಿಡುತ್ತಿರುವ ಸಂಬ್ರಮ...
 ನನ್ನ ಅಜ್ಜಿಯ ಮಡಿಲಲ್ಲಿ .....

ಎಲ್ಲರನ್ನು....  ನೋಡುತ್ತಾ ಇದ್ದನಂತೆ..... ಅದು ಒಂದು ಚೂರು ಅಳದೆ....ಆಮೇಲೆ ಕರೆದುಕೊಂಡು ಹೋಗಿ ಎಲ್ಲೊ ಮಲಗಿಸಿದರು... ಸ್ವಲ್ಪ ಹೊತ್ತು ಆದಮೇಲೆ ,,, ಅಮ್ಮ ಮಡಿಲನ್ನು ಸೇರಿಕೊಂಡೆ.....
ಇನ್ನು ಮುಂದೆ,,, ನನ್ನ ಪ್ರತಿ ದಿನದ... ಪ್ರತಿ ತಿಂಗಳ.. ಆಟಗಳನ್ನು... ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ..... ಆಯ್ತಾ......

18 comments:

  1. "ಹೇಳುವಂತ ಹವನಾಗು ಕಂದ

    ನಾ ಕೇಳಲು ಕಾದಿರುವೆ .... ಈ ಭೂಮಿಗೆ ಸುಸ್ವಾಗತ ....

    ಆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ, ಇದು ನನ್ನ ಹಾರೈಕೆ ...."

    ReplyDelete
  2. super idea..! Putta thumba chennagiddaane. En hesridbeka andkondideera nam sodara aliyange? :)super idea..! Putta thumba chennagiddaane. En hesridbeka andkondideera nam sodara aliyange? :)

    ReplyDelete
  3. ಗುರು....

    ಪ್ರತಿ ಮುಗು ಹುಟ್ಟಿದಾಗ ಒಬ್ಬ ಅಪ್ಪನೂ ಹುಟ್ಟುತ್ತಾನೆ...
    ಮಗು ಬೆಳೆದಂತೆ ಅವನೂ ಸಹ...

    ಹೊಸ ಪ್ರಪಂಚ ನೋಡುವ ಪುಟ್ಟ ಕಣ್ಣುಗಳಿಗೆ ಅಪ್ಪನ ಭರವಸೆಯ ಬೆರಳುಗಳು..

    ನಿಮ್ಮ ಈ ಅನುಭವ ಸೊಗಸಾಗಿದೆ...

    ಮುದ್ದು ಪುಟಾಣಿಗೆ ಶುಭಾಶಯಗಳು..
    ದೃಷ್ಟಿ ತೆಗೆಸಿ ಮೊದಲು...

    ReplyDelete
  4. ಧನ್ಯವಾದಗಳು ಉಮೇಶ್ ಅಂಕಲ್ .... ಎಲ್ಲವನ್ನು ಹೇಳಿಕೊಂಡು ನಿಮ್ಮಗಳ ಜೊತೆ ಸೇರಿಕೊಂಡು ಬೆಳೆಯುತ್ತೇನೆ..... ನಿಮ್ಮ ಆಶೀರ್ವಾದ ಮತ್ತೆ ಹಾರೈಕೆಗೆ ಧನ್ಯವಾದಗಳು...

    ReplyDelete
  5. ಥ್ಯಾಂಕ್ಸ್ ಪೃಥ್ವಿ... ನಿನ್ನ ಸೋದರ ಅಳಿಯನಿಗೆ ಇನ್ನು ಏನು ಒಳ್ಳೆಯ ಹೆಸರು ಸೆಟ್ ಆಗಿಲ್ಲ... ಹುಡುಕ್ತಾ ಇದೇನೇ..... ನೀನು ಯಾವುದಾದರು suggest ಮಾಡು ....

    ReplyDelete
  6. ಹೌದು ಪ್ರಕಾಶಣ್ಣ,,,
    ನನ್ನ ಪುಟ್ಟ ಮಗುವಿನ ಜೊತೆಗೆ,,, ನನ್ನಲ್ಲೂ ಕೂಡ ಅಪ್ಪ ಹುಟ್ಟಿದ್ದಾನೆ,,,, ಇನ್ನು ಮೇಲೆ ನನ್ನ ಜವಾಬ್ದಾರಿ,,, ಜಾಸ್ತಿ ಆಗ್ತಾ ಇದೆ....... :-)
    ನನ್ನ ಮಗನಿಗೆ ಪಕ್ಕು ಮಾಮನ ವಿಷಯವನ್ನು ಮೊದಲೇ ಹೇಳಿದ್ದೇನೆ,,, ಇನ್ನು ನಿಮ್ಮ ಹೆಸರು ಹೇಳಿದರೆ ಸಾಕು,,, ನಗುತ ಇರ್ತಾನೆ ನೋಡಿ.... ಧನ್ಯವಾದಗಳು ಪ್ರಕಾಶಣ್ಣ

    ReplyDelete
  7. ಗುರುಪುತ್ರನೇ ಶುಭವಾಗಲಿ ದೀರ್ಘಾಯುವಾಗಿ ಸಕುಶಲ ಸದಾರೋಗ್ಯ ಪೋಷಿತನಾಗಿ ನೂರ್ಕಾಲ ಬಾಳುವುದರೊಂದಿಗೆ ಅಪ್ಪ-ಅಮ್ಮ, ತಾತ-ಅಜ್ಜಿಯರ ಕಣ್ಮಣಿಯಾಗಿ ಬೆಳಗು...ನಿನ್ನ ಅನುಭವಗಳನ್ನು ಕೇಳಲು ಓದಲು ನೋಡಲು...ನಾವು ರೆಡಿ..

    ReplyDelete
  8. Azad IS - ಪುಟ್ಟಂಗೆ ನಮ್ಮೆಲ್ಲರ ಹಾರ್ದಿಕ ಆಶೀರ್ವಾದಗಳು.....ಜುಗ್ ಜುಗ್ ಜಿಯೋ..ಸಕುಶಲ್ ಸದಾಸುಖೀಭವ

    ReplyDelete
  9. mohith, maanas, manoj, mukul, ...mohith, maanas, manoj, mukul, ...

    ReplyDelete
  10. ಥ್ಯಾಂಕ್ಸ್ ಸೀತಾರಾಮು ಸರ್....

    ReplyDelete
  11. good .... reallly wonderful thought, one day ur son ill see this all....n he ill continue this blog......

    ReplyDelete