Friday, March 31, 2023

ಚಿಕ್ಕ ಮಕ್ಕಳ ....ಪರಿಸರ ಪ್ರವಾಸ

ನನ್ನ ಮಗನಿಗೂ ಸೇರಿಸಿ ಒಂದಷ್ಟು ಮಕ್ಕಳನ್ನು ಗುಡ್ಡೆ ಹಾಕಿಕೊಂಡು, ಅವರಿಗೆ ಪ್ರತ್ಯಕ್ಷ ವಾಗಿ ಪರಿಸರ, ಪಕ್ಷಿ , ಪ್ರಾಣಿ ಇವುಗಳ ಜೊತೆ ಒಡನಾಟ , ಚಾರಣ, ನೇಚರ್ ವಾಕ್ ...ಇಂತಹ ಹಲವಾರು ಕಾರ್ಯಕ್ರಮ ಮಾಡುತ್ತ ಇರುತ್ತೇನೆ.. 
ಚಿಕ್ಕ ಚಿಕ್ಕ ಮಕ್ಕಳಲ್ಲಿ ಮೊದಲು ತಮ್ಮ ಸುತ್ತ ಮುತ್ತ ಪರಿಸರದ ಮತ್ತು ಅದರಿಂದ ಆಗುತ್ತಾ ಇರುವ ಅನುಕೂಲ ಇವುಗಳ ಬಗ್ಗೆ ಪ್ರತ್ಯಕ್ಷ ಅನುಭವ ಆಗಬೇಕು .... ಸ್ಕೂಲ್ ನಲ್ಲಿ ಇವುಗಳ ಬಗ್ಗೆ ಪಾಠ ಪ್ರವಚನ ಇರುತ್ತೆ..ಆದರೆ..ಕೆಲವೊಂದು ವಿಷಯ ಆಳವಾಗಿ ಮನದಟ್ಟು ಆಗಬೇಕು...ಆವಾಗ್ಲೇ ಅದು ತಮ್ಮ ಅನುಭವಕ್ಕೆ ಬರುವುದು... ಮತ್ತು ಆ ವಿಷಯದ ಬಗ್ಗೆ ತುಂಬ ಕುತೂಹಲ ಬೆಳೆತು ಅದನ್ನು ಹುಡುಕಿಕೊಂಡು ಹೋಗುವ ,, ಆ ವಸ್ತು (ಗಿಡ,ಮರ,ಪ್ರಾಣಿ, ಪಕ್ಷಿ,ಕ್ರಿಮಿ, ಕೀಟ,) ಇವುಗಳನ್ನು ಸಂರಕ್ಷಣೆ ಮಾಡುವ ಕಾರ್ಯ ಆಗುವುದು...











 

No comments:

Post a Comment