ಮಗಳ ಜೊತೆ ಮೊದಲ ಪ್ರವಾಸ
ನನ್ನ ಮಗಳಿಗೆ ಮೋಟರ್ ಬೈಕ್ ಮೇಲೆ ಹೋಗಬೇಕು ಎಂದು ತುಂಬಾ ಆಸೆ, ಅದು ಬುಲೆಟ್ bike ಎಂದರೇ ತುಂಬಾನೇ ಇಷ್ಟ ಒಂದು ದಿನ ನನ್ನ ಮಗ ಪ್ರಣವ್ ಅವರ ಕಸಿನ್ಸ್ ಜೊತೆ ಬೇರೆ ಕಡೆಗೆ ಹೋಗಿದ್ದ. ಸರಿ ಹೇಗಿದ್ರು ಬೈಕ್ ಇತ್ತು ನನ್ನ ಮಗಳನ್ನು ಕರೆದುಕೊಂಡು ಹಾಗೆ ಒಂದು ಲಾಂಗ್ ಡ್ರೈವ್ ಹೋಗೋಣಾಂತ ಸಾವನದುರ್ಗ ಬೆಟ್ಟಕ್ಕೆ ಹೊರಟೆವು.
ನನ್ನ ಮಗಳಂತೂ ತುಂಬಾ ಖುಷಿ ಪಟ್ಟಳು. ಬೆಟ್ಟವನ್ನು ಹತ್ತಲಿಕ್ಕೆ ಅವಳಿಗೆ ಮತ್ತೆ ನನ್ನ ಹೆಂಡತಿಗೆ ಆಡಳಿತ ಆಗಲಿಲ್ಲ ಅವರನ್ನು ಕೆಳಗಡೆ ಬಿಟ್ಟು , ನಾನು ಮಾತ್ರ ಬೆಟ್ಟದಮೇಲೆ ಹೋಗಿ ಕೆಲವೊಂದು ಒಳ್ಳೆಯ ದೃಶ್ಯಗಳನ್ನು ಸೆರೆಹಿಡಿದುಕೊಂಡು ಬಂದೆ.
ಒಟ್ಟಿನಲ್ಲಿ ನನ್ನ ನನ್ನ ಮಗನನ್ನು ಬಿಟ್ಟು , ಬರೀ ಮಗಳನ್ನು ಕರೆದುಕೊಂಡು ಬೈಕಿನಲ್ಲಿ ಒಂದು ಲಾಂಗ್ ಡ್ರೈವ್ ಹೋಗುವಂತಾಯಿತು ನನ್ನ ಮಗಳಿಗೆ ಬೆಟ್ಟ ಹತ್ತುವುದಕ್ಕೆ ಎಂಥಾ ಖುಷಿ, ನಮಗೆ ಅವಳೆಲ್ಲಿ ಬಿದ್ದು ಹೋಗ್ತಾಳೆ ಅಂತ ಭಯ, ಒಟ್ಟಿನಲ್ಲಿ ಬೆಟ್ಟದ ಮೇಲೆ ಸ್ವಲ್ಪ ಹತ್ತಿ, ಚೆನ್ನಾಗಿ ಆಟವಾಡಿ ಕೆಲವೊಂದು ಫೋಟೋಗಳನ್ನು ತೆಗೆದುಕೊಂಡು ಹಾಗೆ ಬರುತ್ತಾ ಸೂರ್ಯಾಸ್ತದ ಸಂಭ್ರಮವನ್ನು ಕಣ್ತುಂಬಿಸಿಕೊಂಡು ಮನೆಗೆ ವಾಪಸಾದೆವು
ಅದಾದ ಮೇಲೆ ನನ್ನ ಮಗನಿಗೆ ಫೋಟೋ ತೋರಿಸಿದಾಗ ಅವನಂತೂ ತುಂಬಾ ಕೋಪ ಮಾಡಿಕೊಂಡು ಎಲ್ಲರಿಗೂ ಸರಿಯಾಗಿ ಹೊಡೆದ ಇನ್ನೊಂದು ಸಾರಿ ನಮ್ಮನ್ನು ಬಿಟ್ಟು ಹೋಗಬಾರದು ಎಂದು ಕಟ್ಟಪ್ಪಣೆ ಮಾಡಿದ
ಅದರ ಕೆಲವು ಫೋಟೋಗಳು ಇಲ್ಲಿ ನೋಡಿ
No comments:
Post a Comment