Wednesday, February 22, 2012

ನನ್ನ ಮೊದಲ ಟ್ರಿಪ್ ನ ಅನುಭವ

ತುಂಬಾ ದಿನ ಅದ ಮೇಲೆ,,, ನನ್ನ ಬ್ಲಾಗ್ ನ update ಮಾಡ್ತಾ ಇದೇನೇ,    ಎಲ್ಲಾ ಮೊಮೆಂಟ್ಸ್ ಅಪ್ಡೇಟ್ ಮಾಡೋಣ ಅಂತ ಇದ್ರೆ, ಅಪ್ಪ ಅಮ್ಮಂಗೆ ಭಯ ಅಂತೆ.... ನಂಗೆ ದೃಷ್ಟಿ ಆಗಿಬಿಡುತ್ತೆ ಅಂತ..... ಏನ್ ಮಾಡೋದು ಅದಕ್ಕೆ ಏನು ಶೇರ್ ಮಾಡಿಕೊಳ್ಳ ಲಿಲ್ಲ...
ಮೊದಲ ಸರಿ ಅಪ್ಪ ಅಮ್ಮ ಜೊತೆ....ಬೆಂಗಳೂರಿನಿಂದ ಸ್ವಲ್ಪ ದೂರ ಹೊರಗಡೆ ಹೋಗಿ ಬಂದೆ..... ಹೊಸ ಜಾಗ,,, ಹೊಸ ಜನ,,,, ಹೊಸ ಪರಿಸರ ನೋಡಿ ಖುಷಿ ಆಯಿತು.... ನನ್ನ ಅಪ್ಪ ಮತ್ತೆ ಅಮ್ಮ., ಕಳೆದ ಶನಿವಾರ ನನ್ನನ್ನು,,, ರಾಮನಗರದ ಹತ್ರ ಇರುವ ಜನಪದ ಲೋಕಕ್ಕೆ ಕರೆದುಕೊಂಡು ಹೋಗಿದ್ರು..... ನನಗಂತು ಹೊಸ ಹೊಸ ಜಾಗಗಳನ್ನ ನೋಡಿ....ಫುಲ್ ಖುಷಿ ಆಗಿಬಿಟ್ ಇದ್ದೆ...    ಅಲ್ಲೇ ಇರುವ ಕಾಮತ್ ನಲ್ಲಿ ಊಟ ಮಾಡೋಕೆ ಅಂತ ಅಪ್ಪ ಅಮ್ಮ ಹೋಗಿದ್ದು... ಹಾಗೆ ಅಲ್ಲೇ ಇರುವ ಜನಪದ ಲೋಕದಲ್ಲಿ... ಅಲ್ಲಿ ನಡೆಯುತ್ತಿರುವ ಜಾತ್ರೆ ನಲ್ಲಿ ನಾನು ಜೊತೆಯಾಗಿ... ಹೊರಗಿನ ಪ್ರಪಂಚದ ಮೊದಲ ಅನುಭವಗಳನ್ನ ಸವಿದೆ....  ಅಲ್ಲೇ ಒಂದು ಚಿಕ್ಕ ಬೋಟಿಂಗ್ ಕೂಡ ಇತ್ತು.... ಅಪ್ಪ ಅಮ್ಮನ ಜೊತೆ ಬೋಟಿಂಗ್ ಮಾಡಿಕೊಂಡು,,, ಆರಾಮವಾಗಿ ಸುತ್ತಾಡಿಕೊಂಡು ಬಂದೆ..... ಅಲ್ಲಿನ ಕೆಲವು ಫೋಟೊಗಳನ್ನ ನೋಡಿ .....

       ಜನಪದ ಲೋಕದಲ್ಲಿ   .....ಅಮ್ಮ ಮತ್ತೆ ನಾನು......




 
    ಅಪ್ಪನ ಪ್ರೀತಿಯ ಮುತ್ತು......

ಸುಮ್ಮನೆ ಇರದೇ.. ನನ್ನ ಕೂದಲನ್ನು ತಿನ್ತ ಇದಾರೆ ನಮ್ಮ ಅಪ್ಪ....


ಹಳೇ ಕಾಲದ ಗುಡಿಸಲಿನಲ್ಲಿ.... ಅಮ್ಮನ ಜೊತೆ.... 




ಅಪ್ಪ ಅಮ್ಮನ ಜೊತೆ,,, ಫಸ್ಟ್ ಟೈಮ್ ಬೋಟಿಂಗ್ .......