Monday, July 9, 2018

ಮುದ್ದಿನ ಮಗಳು ತೀಕ್ಷ್ಣ ಹುಟ್ಟಿದ ಹಬ್ಬ - ಮೂರನೇ ವರುಷ.



ಮುದ್ದಿನ ಮಗಳ ಹುಟ್ಟಿದ ಹಬ್ಬ

ನಮ್ಮ ಈ ಪುಟಾಣಿ ಈ ಜುಲೈ 8 ಕ್ಕೆ ಮೂರು ವರ್ಷಗಳನ್ನು ಪೂರೈಸಿದ್ದಾಳೆ, ಚಿಕ್ಕ ಮಕ್ಕಳಿಗೆ ತಮ್ಮ ಹುಟ್ಟುಹಬ್ಬದ ದಿನ ಎಲ್ಲಾ ಮಕ್ಕಳೊಡನೆ ಕೂಡಿಕೊಂಡು ಕೇಕನ್ನು ಕಟ್ಟ ಮಾಡಬೇಕು ಎಂದು ಎಷ್ಟು ಖುಷಿ ಪಡುತ್ತಾರೆ.

ಮಗನಿಗೆ ಏಳು ವರ್ಷ , ಮಗಳಿಗೆ ಮೂರು ವರ್ಷ ಇಬ್ಬರ ಹುಟ್ಟಿದ ಹಬ್ಬದ ಹೆಚ್ಚು ಕಮ್ಮಿ 25 ದಿನಗಳ ಅಂತರ.

ಮೊದಲು ನಮ್ಮ ಪುಟಾಣಿ ತೀಕ್ಷ್ಣ ಇವಳ ಹುಟ್ಟುಹಬ್ಬ ಬರುತ್ತೆ, ಇದಾಗಿ ಹದಿನೈದು ಇಪ್ಪತ್ತು ದಿನಗಳ ಕಾಲ ಕಳೆದರೆ ಮಗನ ಹುಟ್ಟುಹಬ್ಬ ಅದು ಆಗಸ್ಟ್ 1 ನೇ ತಾರೀಕು...

ಕಳೆದೆರಡು ವರ್ಷಗಳಿಂದ ನಮ್ಮ ಮಕ್ಕಳ ಹುಟ್ಟುಹಬ್ಬವನ್ನು ಎಲ್ಲರನ್ನೂ ಕರೆದು ಕೇಕ್ ಕಟ್ ಮಾಡಿ ಸುಮ್ಮನೆ ಹಾಗೆ ಮಾಡಿ ಬಿಡದೆ... ಒಂದು ಒಂದು ರೀತಿ ಸಮಾಜಕ್ಕೆ ಒಳಿತಾಗುವಂತೆ ಮಾಡುತ್ತಾ ಬಂದಿದ್ದೇವೆ, ಮನೆ ಹತ್ತಿರ ಕೆಲವೊಂದು ವೃದ್ಧ ಆಶ್ರಮ ಹಾಗೂ ಅನಾಥ ಮಕ್ಕಳ ಆಶ್ರಮಕ್ಕೆ ನಮ್ಮ ಕೈಲಾಗುವ ಮಟ್ಟಿಗೆ ಒಂದು ದಿನದ ಊಟವನ್ನು ಅಥವಾ ಆಶ್ರಮಕ್ಕೆ ಬೇಕಾಗುವ ಕೆಲವು ಪರಿಕರಗಳನ್ನು ನೀಡುತ್ತ ನಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ಒಂದು ಸಣ್ಣ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ. ಉದ್ದೇಶ ಇಷ್ಟೇ ನಮ್ಮ ಮಕ್ಕಳು ಕೂಡ ಇವಾಗ್ ನಿಂದೆ ಕಷ್ಟದ ಬಗ್ಗೆ ಅನಾಥಾಶ್ರಮ , ವೃದ್ಧಆಶ್ರಮದ ಬಗ್ಗೆ, ಸ್ವಲ್ಪ ತಿಳುವಳಿಕೆ ಬರಲಿ ಎಂದು ಹಾಗೆ ದೊಡ್ಡವರಾಗುತ್ತ "ಕೆರೆಯ ನೀರನ್ನು ಕೆರೆಗೆ ಚೆಲ್ಲಿ " ಎಂದು ತಾವು ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ಈ ರೀತಿಯ ಒಳ್ಳೆಯ ಕಾರ್ಯಗಳಿಗೆ ನಿಯೋಜಿಸಲು ಅರಿವಾಗಲಿ ಎಂದು ಅವರ ಹುಟ್ಟು ಹಬ್ಬದ ಜೊತೆ ಜೊತೆಯಲ್ಲಿ.. ಈ ಕಾರ್ಯಕ್ರಮವು ಕೂಡಿರುತ್ತದೆ... ಸುಖಾಸುಮ್ಮನೆ ದುಂದುವೆಚ್ಚ ಮಾಡುವುದನ್ನು ಬಿಟ್ಟು ನಮ್ಮ ಕೈಲಾದ ಸ್ವಲ್ಪ ಸಹಾಯವನ್ನು ಈ ರೀತಿ ಮಾಡಿದಾಗ ನಮಗೂ ಒಂದು ಮನಸ್ಸಿಗೆ ಸಂತೋಷ ನೆಮ್ಮದಿ ಸಿಗುತ್ತದೆ...

ಈ ವರ್ಷವೂ ಕೂಡ ಗಾಂಧಿ ವೃದ್ರಶ್ರಮ ಮಾಗಡಿ ರಸ್ತೆ ಇಲ್ಲಿಗೆ ಒಂದು ದಿನದ ಊಟದ ಖರ್ಚನ್ನು ಹುಟ್ಟಿದ ಹಬ್ಬದ ಪ್ರಯುಕ್ತ ಕೊಟ್ಟಿದ್ದೆವು




ಮನೆಯ ಹತ್ತಿರ ಇರುವ ಪುಟ್ಟ ಪುಟ್ಟ ಮಕ್ಕಳನ್ನೆಲ್ಲಾ ಕರೆದು ನಮ್ಮ ಮನೆಯ ಪುಟ್ಟ ಪುಟ್ಟಿ ತನ್ನ ಹುಟ್ಟು ಹಬ್ಬವನ್ನು ಸಂಜೆ ಆಚರಿಸಿಕೊಂಡಳು. ತಂಗಿಯ ಹುಟ್ಟಿದ್ದ ಹಬ್ಬದಂದು ,,, ಅಣ್ಣನ ಸಂಬ್ರಮ ನೋಡ ಬೇಕಿತ್ತು... ರೋಡಿನಲ್ಲಿ ಇರುವ ಎಲ್ಲ ಸ್ನೇಹಿತರನ್ನು ಕರೆದು, ಹುಟ್ಟಿದ ಹಬ್ಬಕ್ಕೆ ಬೇಕಾಗುವ ಎಲ್ಲ ತಯಾರಿಗಳನ್ನು ಮಾಡಿಕೊಂಡು , ಬಲೂನ್ ಗಳನ್ನೂ ಊದಿ, ಎಲ್ಲಾ ಕೆಲಸಗಳನ್ನು ಅವನೇ ಮಾಡುತ್ತಾ ಇದ್ದ......

ಮುಂದಿನ ತಿಂಗಳು ಇವನ ಹುಟ್ಟು ಹಬ್ಬ... ನೋಡ ಬೇಕು ಅದಕ್ಕೆ ಇನ್ನೆಷ್ಟು ಸಂಬ್ರಮ ಇರುತ್ತೇ ಅಂತ.....


Add caption




ಅಣ್ಣ ತಂಗಿ....



ಅಣ್ಣ ಹಾಗು ನೆರೆಯ ಸ್ನೇಹಿತರ ಜೊತೆ....








ಮುದ್ದಿನ ಯುವರಾಣಿ..... ನನ್ನ ಮಗಳು.....:-) 






ಪ್ರಣವ್ ಕೂಡ ತಂಗಿ ಜೊತೆ ಪಕ್ಕದಲ್ಲೇ ಕೊತಿದ್ದ ,,, ಕೇಕ್ ಕಟ್ ಮಾಡಲು....





ಮುದ್ದಿನ ಅಮ್ಮನ ಕೈ ಇಂದ ಮೊದಲ ಕೇಕ್....


ಅಜ್ಜಿಯ ಕೈ ಇಂದ ಕೇಕೆ ತಿನ್ನುತ್ತ ಇರುವುದು 


ಅಪ್ಪನ ಕೈ ಇಂದ ಕೇಕ್ ತಿನ್ನುತ್ತ ಇರುವುದು...





ತನ್ನ ಶಾಲೆಯ ಸಹಪಾಟಿ ಗಳ ಜೊತೆ