Friday, September 30, 2011

ಮೊದಲ ವಾರ.........

       ನಾನು ಹುಟ್ಟಿದ ಮೊದಲ 5 ದಿನ,, ಎಲ್ಲಾ ಅಸ್ಪತ್ರೆನಲ್ಲೇ ....  ಅದೇ ನನ್ನ ಮನೆ ಆಗಿತ್ತು.... ಬೆಳಿಗ್ಗೆ ಹೊತ್ತು,, ನನ್ನ ಅಪ್ಪ, ಅಜ್ಜಿ ಇದ್ದು ನೋಡಿಕೊಳ್ತಾ ಇದ್ರೂ... ರಾತ್ರಿ,,  ಇನ್ನೊಂದು ಅಜ್ಜಿ,, ಬಂದು ಜೋತೆನಲ್ಲಿ ಇರ್ತ ಇದ್ರೂ....  ಒಟ್ನಲ್ಲಿ.. ಅಲ್ಲಿ ಇದ್ದಸ್ತು ದಿನ ಟೈಮ್ ಹೋಗಿದ್ದೆ ಗೊತ್ತಾಗಲಿಲ್ಲ....
ಪ್ರತಿ ದಿನ ಬೆಳಿಗ್ಗೆ,, ಹೋಗಿ ಸ್ನಾನ ಮಾಡಿಕೊಂಡ್ ಬಂದು... ಅಮ್ಮನ ಹತ್ರ ಹಾಲು ಕುಡಿದುಕೊಂಡು,,,, ಮಲ್ಕೊಂಡ್ ಬಿಡ್ತಾ ಇದ್ದೆ.... ಅವಾಗವಾಗ doctor  ಬಂದು ನೋಡಿಕೊಂಡು ಹೋಗ್ತಾ ಇದ್ರೂ.....
ಮೂರನೇ ದಿನ ಬೆಳಿಗ್ಗೆ,, ನನ್ನ ಪುಟ್ಟ ಕೈ ಗೆ...ಅದೇನೋ BCG  injection  ಕೊಟ್ರು... ಎಷ್ಟು ನೋವು ಆಯಿತು ಗೊತ್ತ...... :-(   ನನಗೇನು ಹೇಳ್ಕೊಳಕ್ಕೆ ಆಗುತ್ತ,,, ಸುಮ್ನೆ ಅಳುತ್ತಾ ಇದ್ದೆ... :-(
ಇರಲಿ,, ಮೊದಲ ೫ ದಿನ ನಾನು ಹೇಗೆ ಇದ್ದೆ ಅಂತ ನೋಡಿ.....
ಮೂರನೇ ದಿನ.....


-----------------------------------------------------------------------------------------------------------------

ನಾಲ್ಕನೆ ದಿನ...... ಬೆಳಿಗ್ಗೆ......  ನಮ್ ಅಪ್ಪ ನಾನು ಕಣ್ಣು ಮುಚ್ಕೊಂಡ್ ಇದ್ದಾಗಲೇ ಫೋಟೋ ತೆಗಿತ ಇದ್ರೂ.....

-----------------------------------------------------------------------------------------------------------------
5th  ಡೇ
 ಹಾಂ,,, ಇವಾಗ ಕಣ್ಣು ಬಿಟ್ಟ್ ಇದೇನೇ ನೋಡಿ.......

-------------------------------------------------------------------------------------------------------------

Monday, September 19, 2011

ಎರಡನೆ ದಿನ ,,,ಅಮ್ಮನ ಮಡಿಲಿನಲ್ಲಿ

ಎರಡನೆ  ದಿನ ,,,
ಎಲ್ಲರೂ ಬರ್ತಾ ಇದ್ರೂ ನನ್ನ ನೋಡಿಕೊಂಡು ಹೋಗುವುದಕ್ಕೆ.....  ಹೊಸ ಪ್ರಪಂಚದ... ಹೊಸ ಬೆಳಕು,, ಗಾಳಿ.... ಎಲ್ಲರ ಮಾತುಗಳು..... ಅಲ್ಲೇ ಪಕ್ಕದಲ್ಲೇ ನನ್ನ ಜೊತೆಗೆ ಹುಟ್ಟಿದ್ದ ಪುಟ್ಟ ಮಗುವಿನ ಅಳು... ಎಲ್ಲವೂ ಹೊಸತು .... ಎನ್ನು ಗೊತ್ತಿಲ್ಲದ ಹಾಗೆ...  ಅಮ್ಮನ ಮಡಿಲಿನಲ್ಲಿ,,, ಬೆಚ್ಚಗೆ ಹಾಲು ಕುಡ್ಕೊಂಡ್  ಕಾಲ ಕಳೀತ  ಇದ್ದೆ.....!!!!
ನನ್ನ ಮೊದಲ 5 ದಿನಗಳು ಪೂರ್ತ ಅಸ್ಪತ್ರೆನಲ್ಲೇ....   ದಿನ ಬೆಳಿಗ್ಗೆ ನರ್ಸಮ್ಮ  ಕರ್ಕೊಂಡ್ ಹೋಗಿ... ಬಿಸಿ ಬಿಸಿ ಸ್ನಾನ ಮಾಡಿಸ್ತ ಇದ್ರೂ,,, ನಾನು ಆಸ್ಪತ್ರೆ ನಲ್ಲಿ ಇದ್ದಷ್ಟು ದಿನ . ನನ್ನ ಅಪ್ಪ ನೆ ಅಂತೆ ಸ್ನಾನಕ್ಕೆ ಕರ್ಕೊಂಡ್ ಹೋಗ್ತಾ ಇದ್ದದ್ದು  ......  

Thursday, September 15, 2011

ಹೊಸ ಜಗತ್ತಿಗೆ ಬಂದ .....ಮೊದಲ ದಿನದ ಅನುಭವಗಳು........ My First Day Experiance in this New world

ಹಲೋ.... ನಮಸ್ತೆ.... :-)  
      ಈ ಪ್ರಪಂಚಕ್ಕೆ ಕಣ್ಣು ಬಿಟ್ಟಿರುವ ಹೊಸ ಪಾಪು ನಾನು.....  ಅಮ್ಮನ ಹೊಟ್ಟೆಯೊಳಗೆ ಬೆಚ್ಚಗೆ ಇದ್ದೆ.... ನನ್ನದೇ ಅದ ಲೋಕದಲ್ಲಿ...ನನ್ನ ಪುಟ್ಟ ಪುಟ್ಟ ಕೈಗಳನ್ನು..ಕಾಲುಗಳನ್ನು ಮುದುರಿಕೊಂಡು.. ಅಮ್ಮನ ಹೊಟ್ಟೆಯನ್ನು ಒದ್ದುಕೊಂಡು...ಆಟ ಆಡಿಕೊಂಡು.... ಹಾಯಾಗಿ ಇದ್ದೆ....     ಆಗಸ್ಟ್ 1 ನೆ ದಿನಾಂಕದಂದು...  ಸೋಮವಾರ ಬೆಳಿಗ್ಗೆ 10 :36 ಕ್ಕೆ ನಾನು ಈ ಹೊಸ ಪ್ರಪಂಚಕ್ಕೆ ಕಾಲಿಟ್ಟೆ.....  ನನ್ನ ಅಪ್ಪ ... ಅಮ್ಮ,, ಅಜ್ಜಿಯರು, ತಾತ, ಚಿಕ್ಕಮ್ಮ, ದೊಡ್ಡಮ್ಮ... ... ಎಲ್ಲರೂ ನಾನು ಬರುವುದನ್ನೇ ಕಾಯುತ್ತಿದ್ದರಂತೆ.....   ಅಮ್ಮನಿಗೆ ನನ್ನ  ಮುಖ ತೋರಿಸಿ.... ಮೊದಲು ಸೇರಿದ್ದು,, ನನ್ನ ಅಪ್ಪನ ಮಡಿಲಿಗೆ......

ಮೊದಲು ಬಂದಾಗ ಏನೋ ಒಂದು ತರಹ ದ ಭಯ... ಗಾಭರಿ.... ನೋಡಿ ಹೇಗೆ ಇದ್ದೆ ಮೊದಲ ದಿನ ನಾನು ಅಂತ...
     

ಮೊದಲ ದಿನದ ... ಮೊದಲ ನೋಟ...  ಹೊಸ ಪ್ರಪಂಚದ ,,, ಹೊಸ ಜಗತ್ತಿಗೆ ಕಾಲಿಡುತ್ತಿರುವ ಸಂಬ್ರಮ...
 ನನ್ನ ಅಜ್ಜಿಯ ಮಡಿಲಲ್ಲಿ .....

ಎಲ್ಲರನ್ನು....  ನೋಡುತ್ತಾ ಇದ್ದನಂತೆ..... ಅದು ಒಂದು ಚೂರು ಅಳದೆ....ಆಮೇಲೆ ಕರೆದುಕೊಂಡು ಹೋಗಿ ಎಲ್ಲೊ ಮಲಗಿಸಿದರು... ಸ್ವಲ್ಪ ಹೊತ್ತು ಆದಮೇಲೆ ,,, ಅಮ್ಮ ಮಡಿಲನ್ನು ಸೇರಿಕೊಂಡೆ.....
ಇನ್ನು ಮುಂದೆ,,, ನನ್ನ ಪ್ರತಿ ದಿನದ... ಪ್ರತಿ ತಿಂಗಳ.. ಆಟಗಳನ್ನು... ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ..... ಆಯ್ತಾ......