Friday, March 31, 2023

ಚಿಕ್ಕ ಮಕ್ಕಳ ....ಪರಿಸರ ಪ್ರವಾಸ

ನನ್ನ ಮಗನಿಗೂ ಸೇರಿಸಿ ಒಂದಷ್ಟು ಮಕ್ಕಳನ್ನು ಗುಡ್ಡೆ ಹಾಕಿಕೊಂಡು, ಅವರಿಗೆ ಪ್ರತ್ಯಕ್ಷ ವಾಗಿ ಪರಿಸರ, ಪಕ್ಷಿ , ಪ್ರಾಣಿ ಇವುಗಳ ಜೊತೆ ಒಡನಾಟ , ಚಾರಣ, ನೇಚರ್ ವಾಕ್ ...ಇಂತಹ ಹಲವಾರು ಕಾರ್ಯಕ್ರಮ ಮಾಡುತ್ತ ಇರುತ್ತೇನೆ.. 
ಚಿಕ್ಕ ಚಿಕ್ಕ ಮಕ್ಕಳಲ್ಲಿ ಮೊದಲು ತಮ್ಮ ಸುತ್ತ ಮುತ್ತ ಪರಿಸರದ ಮತ್ತು ಅದರಿಂದ ಆಗುತ್ತಾ ಇರುವ ಅನುಕೂಲ ಇವುಗಳ ಬಗ್ಗೆ ಪ್ರತ್ಯಕ್ಷ ಅನುಭವ ಆಗಬೇಕು .... ಸ್ಕೂಲ್ ನಲ್ಲಿ ಇವುಗಳ ಬಗ್ಗೆ ಪಾಠ ಪ್ರವಚನ ಇರುತ್ತೆ..ಆದರೆ..ಕೆಲವೊಂದು ವಿಷಯ ಆಳವಾಗಿ ಮನದಟ್ಟು ಆಗಬೇಕು...ಆವಾಗ್ಲೇ ಅದು ತಮ್ಮ ಅನುಭವಕ್ಕೆ ಬರುವುದು... ಮತ್ತು ಆ ವಿಷಯದ ಬಗ್ಗೆ ತುಂಬ ಕುತೂಹಲ ಬೆಳೆತು ಅದನ್ನು ಹುಡುಕಿಕೊಂಡು ಹೋಗುವ ,, ಆ ವಸ್ತು (ಗಿಡ,ಮರ,ಪ್ರಾಣಿ, ಪಕ್ಷಿ,ಕ್ರಿಮಿ, ಕೀಟ,) ಇವುಗಳನ್ನು ಸಂರಕ್ಷಣೆ ಮಾಡುವ ಕಾರ್ಯ ಆಗುವುದು...











 

Tuesday, September 1, 2020

kids Time



Pranav and teekshna with Gare gare manganna song

#gare gare manganna
 

Friday, September 14, 2018

ಗಣೇಶ ಹಬ್ಬದ ಸಡಗರ -2018

ನಾವು ಚಿಕ್ಕವರಾಗಿದ್ದಾಗ   ಹಬ್ಬಗಳ ಸಡಗರ ತುಂಬ ಜೋರು ಇರುತಿತ್ತು....  ಎಲ್ಲರೂ ಒಟ್ಟಿಗೆ ಸೇರಿ, ಹೊಸ ಬಟ್ಟೆ, ಆಟ, ದೇವರ ಪೂಜೆ,....  ನೇವೈದ್ಯಕ್ಕೆ ಮಾಡುವ ಕಡುಬು.....  ಅಬ್ಬ...  ನಮಗಂತೂ ಸಡಗರವೋ ಸಡಗರ....
ಆದರೆ ಈ ಜನರೇಶನ್ ಮಕ್ಕಳಿಗೆ ನಾವು ಪಡುತ್ತಿದ್ದ ಸಡಗರ ಸಂಬ್ರಮ ಅಷ್ಟಾಗಿ ಸಿಗುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ...
ಅವಗೆಲ್ಲ ಹೊಸ ಬಟ್ಟೆ ಬರಬೇಕು ಅಂದರೆ ಹಬ್ಬಗಳು ಬರಬೇಕಿತ್ತು....  ಆದರೆ ಇವಾಗ.....  ಆನ್ಲೈನ್ ಶಾಪಿಂಗ್ ಬಂದಮೇಲೆ  ಅಲ್ಲಿ ಯಾವಾಗ ಡಿಸ್ಕೌಂಟ್ ಸಿಗುತ್ತೋ ಅವಾಗ ತೆಗೆದು ಇಟ್ಟು ಕೊಳ್ಳುವುದು ಸಾಮಾನ್ಯವಾಗಿದೆ...  ಅದನ್ನೇ ಹಬ್ಬ ಹರಿದಿನಗಳಲ್ಲಿ ಹೊಸಾದು ಅಂತ ಹಾಕಿಕೊಳ್ಳೋದು.....
ಒಟ್ನಲ್ಲಿ ಒಂದು ಇಪ್ಪತು ಮೂವತ್ತು ವರುಷದ ಕೆಳಗೆ ಇರುತ್ತಿದ್ದಂದ ಹಬ್ಬದ ವಾತವರಣ ಇವಾಗ ಇಲ್ಲ ಇದು ನನ್ನ ಅಭಿಪ್ರಾಯ...
ನೆನ್ನೆ ನಡೆದ ಗಣಪತಿ ಹಬ್ಬದ , ನಮ್ಮ ಮಕ್ಕಳ ಸಂಬ್ರಮ ಸಡಗರ.....